ಭದ್ರಾ ವನ್ಯಜೀವಿ ಅಭಯಾರಣ್ಯ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಿಂದ ೩೮ ಕಿ.ಮಿ ದೂರದಲ್ಲಿದೆ. ಅಭಯಾರಣ್ಯವು ಮುತ್ತೊಡಿ ಹಳ್ಳಿಯ ಸಮೀಪ ಇರುವುದರಿಂದ ಅದಕ್ಕೆ ಮುತ್ತೋಡಿ ಅಭಯಾರಣ್ಯ ಯೆಂದೂ ಕರೆಯುತ್ತಾರೆ. ಅಭಯಾರಣ್ಯವು ಮುಲ್ಲಯ್ಯನಗಿರಿ, ಹೆಬ್ಬೆಗಿರಿ ಹಾಗೂ ಬಾಬಾಬುಡನ್‍ಗಿರಿ ಬೆಟ್ಟಗಳಿಂದ ಸುತ್ತುವರಿದಿದ್ದು, ಭದ್ರಾ ನದಿಯ ಉಪನದಿಯು ಹಾದು ಬರುತ್ತದೆ. ಅಭಯಾರಣ್ಯದ ಪಶ್ಚಿಮ ಗಡಿ ಭದ್ರಾ ಅಣೆಕಟ್ಟನ್ನು ಸ್ಪರ್ಶಿಸುತ್ತದೆ. ಭದ್ರಾ ಅಣೆಕಟ್ಟು ೧,೯೬೮ ಚದರ ಕಿಮಿ ಜಲಾನಯನ ಪ್ರದೇಶ ಹೊಂದಿದ್ದು ಸುಂದರ ನಿಸರ್ಗವನ್ನು ಒಳಗೊಂಡಿದೆ. == ಸಂರಕ್ಷಣೆ ಇತಿಹಾಸ == ೧೯೫೧ ರಲ್ಲಿ ಮೈಸೂರು ಸರ್ಕಾರದ ಆಳ್ವಿಕೆಯಲ್ಲಿ ಈ (೭೭.೪೫ ಚದರ ಕಿಮಿ ವಿಸ್ತೀರ್ಣ) ಜಾಗವನ್ನು ಜಾಗರ ವ್ಯಾಲಿ ವನ್ಯಜೀವಿ ಅಭಯಾರಣ್ಯಯೆಂದು ಅಭಿವ್ಯಕ್ತಗೊಳಿಸಲಾಗಿತ್ತು. ಪ್ರಾಣಿ ಮತ್ತು ವನ ಸ್ಥಿತಿಯ ಒಂದು ಕ್ರಮವಾದ ಸಮೀಕ್ಷೆಯ ಪ್ರಕಾರ ಪ್ರದೇಶ ಹಾಗೂ ಸುತ್ತಲಿನ ಸಾಲು ೧೯೭೪ರಲ್ಲಿ ಹಿಂದಿನ ಪ್ರಾಂತ್ಯವನ್ನು ದಾಟಿದೆ. --> == ==